¡Sorpréndeme!

ಕೊಪ್ಪಳದಲ್ಲಿ ಎಲ್ಲಿ ನೋಡಿದ್ರೂ ಬರಗಾಲ-ಕನಕಗಿರಿಯ ಎಂಟು ಕೆರೆಗಳು ಮಾತ್ರ ಫುಲ್ | Koppala | Kanakagiri

2021-07-06 8 Dailymotion

ಮಾನ್ಸೂನ್ ಅಧಿಕೃತವಾಗಿ ರಾಜ್ಯವನ್ನು ಪ್ರವೇಶ ಮಾಡಿದರೂ ಹೇಳಿಕೊಳ್ಳುವಂತಹ ಮಳೆ ಆಗುತ್ತಿಲ್ಲ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಚದುರಿದ ಮಳೆ ಆಗಿದ್ದು, ಈ ವರ್ಷವೂ ಮತ್ತೆ ಬರಗಾಲದ ಕರಿ ನೆರಳು ಬೀಳುತ್ತಾ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಈ ನಡುವೆ ಕೊಪ್ಪಳ ಜಿಲ್ಲೆಯ ಕನಕಗಿರಿಯ ವಿಧಾನಸಭಾ ಕ್ಷೇತ್ರದ 8 ಕೆರೆಗಳು ತುಂಬಿದ್ದು, ವರ್ಷದ 365 ದಿನ ಸಹ ನೀರು ಲಭ್ಯವಾಗುತ್ತಿದೆ.



ಕನಕಗಿರಿ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿದ್ರೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬರಗಾಲದ ಛಾಯೆ ಮನೆ ಬಾಗಿಲಿನಲ್ಲಿ ಬಂದು ನಿಂತಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಟಾಪೂರ, ಲಕ್ಷ್ಮಿದೇವಿ, ರಾಂಪೂರ್, ದೇವಲಾಪೂರ, ಲಾಯದುಣಿಸಿ, ವಿಠಲಾಪುರ, ಗೌರಿಪುರ, ಬಸಿರಹಾಳ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ಮುಂದಾಲೋಚನೆಯಿಂದಲೇ ಇಂದು ಕನಕಗಿರಿಯ ಕ್ಷೇತ್ರದ ಎಂಟು ಕೆರೆಗಳು ಭರ್ತಿಯಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.



ಈ ಎಂಟು ಕೆರೆಗಳ ಸುತ್ತ ಮುತ್ತ ಇರು ರೈತರು ಪಪ್ಪಾಯಿ, ಚಿಕ್ಕು, ದಾಳಿಂಬೆ ಹಾಗೂ ಬಾಳೆ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಕೆರೆಯ ನೀರಿನಿಂದ ಜಾನುವಾರುಗಳು ಅಂತರ್ಜಲದಿಂದ ರೈತರ ಹೊಲದಲ್ಲಿ ಈಗಲೂ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಸುತ್ತಮುತ್ತಲಿನ ಜನ ಬರಗಾಲ ಬಂದ್ರೆ ಸಾಕು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗ್ತಿತ್ತು. ಇಲ್ಲಿನ ಜನ ದೂರದ ಬೆಂಗಳೂರು, ಮಂಗಳೂರು ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಇಲ್ಲಿನ ರೈತರು ಗುಳೆ ಹೋಗುವುದು ಭಾಗಶಃ ನಿಂತಿದೆ.



ಸಿದ್ದರಾಮಯ್ಯರ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಶಿವರಾಜ್ ತಂಗಡಗಿ ಮುಂದಾಲೋಚನೆಯಿಂದ ಎಂಟು ಕೆರೆಗಳು ತುಂಬಿವೆ ಅನ್ನೋದು ಸ್ಥಳೀಯರ ಮಾತು. ಕಳೆದ ಮೂರು ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದಿಂದ ಸುಮಾರು 150 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ಎಂಟು ಕೆರೆಗೆ ನೀರು ತುಂಬಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಆದರೆ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಕೆರೆಗಳು ಭರ್ತಿಯಾಗಿದೆ. ಮಳೆಯಾಗದಿದ್ದರೂ ಇಲ್ಲಿನ ಜನರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ.


For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv